Back
ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಾರ್ಯವ್ಯಾಪ್ತಿ ಹಾಗೂ ಧ್ಯೇಯೋದ್ದೇಶ

     

     ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ವಿವಿಧ ರೀತಿಯ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದು, ಜಾನುವಾರು ಅಭಿವೃದ್ದಿ, ಮೇವು ಅಭಿವೃದ್ದಿ, ವಿಸ್ತರಣಾ ಸೇವೆಗಳು ಮತ್ತು ತರಬೇತಿ, ಕಕ್ಕುಟ ಅಭಿವೃದ್ದಿ, ಮೊಲ ಸಾಕಾಣಿಕಾ ಅಭಿವೃದ್ದಿ, ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳ ಅನುಷ್ಟಾನಗೊಳಿಸುವ ಕಾರ್ಯ ಹಮ್ಮಿಕೊಂಡಿದೆ. ಜಾನುವಾರು ಸಂಪತ್ತಿನ ಆರೋಗ್ಯ ರಕ್ಷಣೆಯ ಕಾರ್ಯವನ್ನು ನಿರ್ವಹಿಸುತ್ತಿದೆ. ಪ್ರಮುಖ ಪ್ರಾಣಿಜನ್ಯ ಉತ್ಪನ್ನಗಳಾದ ಹಾಲು, ಮೊಟ್ಟೆ, ಮಾಂಸ, ಉಣ್ಣೆ ಮತ್ತೀತ್ತರ ಉತ್ಪನ್ನಗಳ ಪ್ರಮಾಣವನ್ನು ಅಂದಾಜು ಮಾಡುವುದಕ್ಕಾಗಿ ವರ್ಷ ಪೂರ್ತಿ ಸಮಗ್ರ ಮಾದರೀ ಸಮೀಕ್ಷೆಯನ್ನು ನಡೆಸುವುದು. ಈ ಎಲ್ಲಾ ಚಟುವಟಿಕೆಗಳ ಅಂತಿಮ ಗುರಿ ಜಾನುವಾರು ಉತ್ಪನ್ನಗಳಾದ ಹಾಲು, ಮಾಂಸ, ಉಣ್ಣೆ ಮತ್ತು ಕುಕ್ಕುಟ ಉತ್ಪನ್ನಗಳಾದ ಮೊಟ್ಟೆ ಮತ್ತು ಕೋಳಿ  ಮಾಂಸವನ್ನು ಹೆಚ್ಚಿಸುವುದಾಗಿರುತ್ತದೆ.

ಜಿಲ್ಲೆಯ ಗ್ರಾಮೀಣ ಆರ್ಥಿಕ ಅಭಿವೃದ್ದಿಯಲ್ಲಿ ಜಾನುವಾರು ಮತ್ತು ಕುಕ್ಕುಟಗಳು ಮಹತ್ವದ ಪಾತ್ರ ವಹಿಸುತ್ತಿವೆ.

 

ಕ್ರ.ಸಂ

ಪದನಾಮ

ಕಚೇರಿ ಇ-ಮೇಲ್ ವಿಳಾಸ

ದೂರವಾಣಿ

1.

ಉಪನಿರ್ದೇಶಕರು(ಆಡಳಿತ)

uknddahvs@gmail.com

08382 226467

2.

ಉಪನಿರ್ದೇಶಕರು (ಪಾಲಿಕ್ಲಿನಿಕ್)

ddpkarwarahvs10@gmail.com 

08419 261105

×
ABOUT DULT ORGANISATIONAL STRUCTURE PROJECTS