Back
ಉತ್ತರ ಕನ್ನಡ ಕುರಿತು

ಉತ್ತರ ಕನ್ನಡದ ಬಗ್ಗೆ

             ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕ ರಾಜ್ಯದ 5 ನೇ ಅತಿ ದೊಡ್ಡ ಜಿಲ್ಲೆಯಾಗಿದ್ದು, ಹೇರಳವಾದ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದೆ. ದಟ್ಟವಾದ ಅರಣ್ಯ, ದೀರ್ಘಕಾಲಿಕ ನದಿಗಳು, ಮತ್ತು ಹೇರಳವಾಗಿರುವ ಸಣ್ಣ ಮತ್ತು ಪ್ರಾಣಿಗಳೊಂದಿಗೆ ಸುಮಾರು 140 ಕಿ.ಮೀ.ಉದ್ದದ ಕರಾವಳಿ ರೇಖೆಯೊಂದಿಗೆ ಜಿಲ್ಲೆಯು ವೈವಿಧ್ಯಮಯ ಭೌಗೋಳಿಕ ಲಕ್ಷಗಳನ್ನು ಹೊಂದಿದೆ.

            ಉತ್ತರ ಕನಾರ ಅಥವಾ ಉತ್ತರ ಕೆನರಾ ಎಂದೂ ಕರೆಯಲ್ಪಡುವ ಉತ್ತರ ಕನ್ನಡ ಭಾರತದ ಕರ್ನಾಟಕ ರಾಜ್ಯದ ಕೊಂಕಣ ಜಿಲ್ಲೆಯಾಗಿದೆ. ಇದು ಉತ್ತರಕ್ಕೆ ಗೋವಾ ರಾಜ್ಯ ಮತ್ತು ಬೆಳಗಾವಿ ಜಿಲ್ಲೆ, ಪೂರ್ವದಲ್ಲಿ ಧಾರವಾಡ ಜಿಲ್ಲೆ ಮತ್ತು ಹಾವೇರಿ ಜಿಲ್ಲೆ, ದಕ್ಷಿಣಕ್ಕೆ ಶಿವಮೊಗ್ಗ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಮತ್ತು ಪಶ್ಚಿಮಕ್ಕೆ ಅರಬ್ಬಿ ಸಮುದ್ರದಿಂದ ಗಡಿಯಾಗಿದೆ. ಕಾರವಾರ ನಗರವು ಜಿಲ್ಲೆಯ ಆಡಳಿತ ಕೇಂದ್ರವಾಗಿದೆ.

            ಉತ್ತರ ಕನ್ನಡ ಜಿಲ್ಲೆಯು ಐತಿಹಾಸಿಕ ಮತ್ತು ಪೌರಾಣಿಕ ಹಿನ್ನಲೆಯುಳ್ಳ, ಶಾತವಾಹನರು, ಪಲ್ಲವರು ಮತ್ತು ಕದಂಬರು ಆಳಿದ ಪ್ರದೇಶವಾಗಿರುತ್ತದೆ. ಉತ್ತರ ಕನ್ನಡ ಜಿಲ್ಲೆಯು 350-525 AD ವರೆಗೆ ಕದಂಬ ಸಾಮ್ರಾಜ್ಯದ ನೆಲೆಯಾಗಿದ್ದು. ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ಜಿಲ್ಲೆಯ ಘಟ್ಟ ಪ್ರದೇಶವು ಸ್ವಾಧಿ ವ್ಯಾಪ್ತಿಗೆ ಒಳಪಟ್ಟಿತು. ಜಿಲ್ಲೆಯ ಪ್ರಥಮ ಸ್ವಾತಂತ್ರ್ಯ ಹೋರಾಟಗಾರರಾದ ಶಿವಪ್ಪ ನಾಯಕ 1645 AD ಯಿಂದ 1660 AD ವರೆಗೆ ಈ ಜಿಲ್ಲೆಯನ್ನು ಆಳಿದರು. ಹೆಸರಾಂತ “ಕರಿಮೆಣಸಿನ ರಾಣಿ” ಎಂದೇ ಕರೆಯಲ್ಪಡುವ ರಾಣಿ ಚೆನ್ನಭೈರಾದೇವಿಯು ಈ ಜಿಲ್ಲೆಯನ್ನು ಆಳಿದ ಪ್ರಥಮ ಮಹಿಳೆ ಆಗಿರುತ್ತಾಳೆ. 1862 ರಲ್ಲಿ ಈ ಪ್ರದೇಶವು ಬೊಂಬೆ ಪ್ರೆಸಿಡೆನ್ಸಿಯ ವ್ಯಾಪ್ತಿಗೆ ಒಳಪಟ್ಟಿತ್ತು. ಭಾರತ ಸ್ವಾತಂತ್ಯ್ರದ ನಂತರ ಈ ಜಿಲ್ಲೆಯನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಯ್ತು. ಬ್ರಿಟೀಷರು ಈ ಜಿಲ್ಲೆಯನ್ನು “ನೋರ್ತ ಕೆನರಾ” ಎಂದು ಕರೆದರು. ಆದರೆ ರಾಜ್ಯ ಸರ್ಕಾರ ಈ ಜಿಲ್ಲೆಯನ್ನು “ಉತ್ತರ ಕನ್ನಡ” ಎಂಬ ಹೆಸರಿನಿಂದ 1976 ರಿಂದ ಕರೆಯಲ್ಪಟ್ಟಿತು.

             ಈ ಜಿಲ್ಲೆಯ ಒಟ್ಟು ಭೌಗೋಳಿಕ ಪ್ರದೇಶವು 10,327 ಚ.ಕಿ.ಮೀ. ಅದರಲ್ಲಿ ಶೇ.75 ಕ್ಕಿಂತ ಹೆಚ್ಚಿನ ಪ್ರದೇಶವು ಅರಣ್ಯ ಪ್ರದೇಶವಾಗಿರುತ್ತದೆ. ಜಿಲ್ಲೆಯು ಕರಾವಳಿ, ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶವನ್ನು ಒಳಗೊಂಡಿರುತ್ತದೆ.

             ಉತ್ತರ ಕನ್ನಡ ಜಿಲ್ಲೆಯು ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌ ಮತ್ತು ಜೈನ್ ಧರ್ಮದ ಜನರನ್ನು ಒಳಗೊಂಡಿರುತ್ತದೆ. ಈ ಜಿಲ್ಲೆಯು ವೈವಿಧ್ಯಮಯವಾದ ಕಲೆ ಮತ್ತು ಸಂಸ್ಕೃತಿಯನ್ನು ಹೊಂದಿರುತ್ತದೆ. ಯಕ್ಷಗಾನವು ಈ ಜಿಲ್ಲೆಯ ಪ್ರಸಿದ್ಧ ಜನಪದ ಕಲೆಯಾಗಿದ್ದು, ಕೋಲಾಟ, ಸುಗ್ಗಿ ಕುಣಿತ, ಗುಮಟೆಪಾಂಗ್‌, ಜೋಗಿಪದ, ಬೇಡರವೇಶ, ಡೊಳ್ಳು ಕುಣಿತ ಮತ್ತು ಸೋಬಾನೆ ಹಾಡುಗಳು ಈ ಜಿಲ್ಲೆಯ ವಿವಿಧ ಕಲೆಗಳಾಗಿರುತ್ತವೆ.

             ಉತ್ತರ ಕನ್ನಡವು ನದಿಗಳ ನಾಡು. ಕಾಳಿ, ಗಂಗಾವಳಿ, ಅಘನಾಶಿನಿ ಮತ್ತು ಶರಾವತಿ ನದಿಗಳು ಮುಖ್ಯ ನದಿಗಳು. ವೆಂಕಟಾಪುರ ಮತ್ತು ವರದಾ ಇತರ ನದಿಗಳು. ಈ ನದಿಗಳು ಅನೇಕ ಜಲಪಾತಗಳನ್ನು ರೂಪಿಸುತ್ತವೆ. ಪ್ರಸಿದ್ಧ ಜಲಪಾತಗಳಾದ ಜೋಗಪಾಲ್ಸ್‌, ಉಂಚಳ್ಳಿ ಪಾಲ್ಸ್‌, ಮಾಗೋಡ ಪಾಲ್ಸ್‌, ಸಾತೋಡಿ ಪಾಲ್ಸ್‌, ಶಿವಗಂಗಾ ಪಾಲ್ಸ್‌ ಮತ್ತು ವಿಭೂತಿ ಪಾಲ್ಸ್‌ಗಳು ಸೇರಿವೆ.

             ಖ್ಯಾತ ಬಂಗಾಳಿ ಕವಿ ಮತ್ತು ನೊಬಲ್‌ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್‌ ರವರು ತಮ್ಮ ಆತ್ಮ ಚರಿತ್ರೆಯ ಸಂಪೂರ್ಣ ಅಧ್ಯಯನವನ್ನು ಈ ಪಟ್ಟಣಕ್ಕೆ ಅರ್ಪಿಸಿದರು. ಕಾರವಾರದ ಸಮುದ್ರ ತೀರವನ್ನು ಹೆಸರಾಂತ ಕವಿ ರವೀಂದ್ರನಾಥ ಟ್ಯಾಗೋರ್‌ ರವರು ಈ ರೀತಿ ವರ್ಣಿಸಿದ್ದಾರೆ: “ಕಾರವಾರದ ಪ್ರಾಕೃತಿಕ ಸೌಂದರ್ಯ ಬರೀ ಕಲ್ಪನೆಯ ಮರೀಚಿಕೆಯಲ್ಲ, ಬದಲಾಗಿ ಕಲ್ಪನಾತೀತವಾದದ್ದು. ಆದರೆ, ಕಲ್ಪನೆಗೂ ಮೀರಿದ ಅನಂತ ಸಂತೋಷವನ್ನು ನೀಡುವ ಸ್ವರ್ಗ ಸದೃಶ ತಾಣ”

×
ABOUT DULT ORGANISATIONAL STRUCTURE PROJECTS